ಆರ್ ಎನ್ ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಯಶಸ್ವಿಯಾದ

Share

ಉದ್ಯೋಗ ಮೇಳ

ದಿನಾಂಕ 10.01.2024ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಆರ್ ಎನ್ ಎಸ್ ಪ್ರಥಮ ದರ್ಜೆ
ಕಾಲೇಜು ಮತ್ತು ಆರ್ ಎನ್ ಎಸ್ ರೂರ್‌ಲ್ ಪಾಲಿಟೆಕ್ನಿಕ್‌ ಕಾಲೇಜ್ ಇವರ ಸಂಯುಕ್ತ ಆಶ್ರಯದಲ್ಲಿ
ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
  ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮುಖೇನ ಉದ್ಘಾಟಿಸಿದ ಆರ್ ಎನ್ ಎಸ್ ಸಮೂಹ
ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳಾದ   ದಿನೇಶ್ ಗಾಂವಕರ್ ರವರು ಮಾತನಾಡಿ  ಉದ್ಯೋಗ
ಆಕಾಂಕ್ಷಿಗಳು ಈ ಮೇಳಗಳಲ್ಲಿ  ಭಾಗವಹಿಸಿ ಉದ್ಯೋಗವನ್ನು ಪಡೆದುಕೊಂಡು ಜೀವನ
ಸಫಲಗೊಳಿಸಿಕೊಳ್ಳಬೇಕೆಂದರು. ವೇದಿಕೆಯಲ್ಲಿ ಆರ್ ಎನ್ ಎಸ್ ರೂರ್‌ಲ್ ಪಾಲಿಟೆಕ್ನಿಕ್‌ ಕಾಲೇಜಿನ
ಪ್ರಾಚಾರ್ಯಾರಾದ ಸಂತೋಷ ಸರ್‌. ಮಾತನಾಡಿ. ಉದ್ಯೋಗ ಆಕಾಂಕ್ಷಿಗಳು ಉದ್ಯೋಗವನ್ನು
ಅರಸುವುದು ಒಂದು ಕಾಯಕ. ಇದರಲ್ಲಿ ಸದಾ ತೊಡಗಿಸಿಕೊಂಡಾಗ ಖಂಡಿತ ನಾವು ಯಾವುದಾದರೂ
ಒಂದು ಉದ್ಯೋಗದಲ್ಲಿ ಪಾಲ್ಗೊಳ್ಳಲು ಸಾಧ್ಯತೆ ಇದೆ ಎಂಬುದನ್ನ ತಿಳಿಸಿದರು.
  ನಮ್ಮೊಂದಿಗೆ ದೂರದ ಬೆಂಗಳೂರಿನಿಂದ ಆಗಮಿಸಿದ  ಸಂಪನ್ಮೂಲ ವ್ಯಕ್ತಿಗಳಾದ ಪ್ರೊ. ರಘು ಕೆ ವಿ
ಮತ್ತು ಪಳನಿ ವೇಲುರವರು ಮಾತನಾಡಿ ಎಲ್ಲರನ್ನು ಸ್ವಾಗತಿಸಿ ಉದ್ಯೋಗ ನೀಡುವ ಭರವಸೆಯನ್ನ
ನೀಡಿದರು.
  ಡಿಪ್ಲೋಮಾ ಕಾಲೇಜಿನ ಪ್ಲೇಸ್ಮೆಂಟ್ ಅಧಿಕಾರಿಗಳಾದ ಕೆ ಮರಿಸ್ವಾಮಿ ಮತ್ತು ಪದವಿ ಕಾಲೇಜಿನ
ಪ್ಲೇಸ್ಮೆಂಟ್ ಅಧಿಕಾರಿಯದ ಗಣೇಶ್ ನಾಯ್ಕ ಹಾಜರಿದ್ದು, ಉಪನ್ಯಾಸಕಿ ಉಷಾ ನಾಯ್ಕ
ಕಾರ್ಯಕ್ರಮವನು ನಿರೂಪಿಸುದರು.ಜಿಲ್ಲೆ ಎಲ್ಲಾ ತಾಲೂಕುಗಳಿಂದ 200 ಜನ ಅಭ್ಯರ್ಥಿಗಳು ಆಗಮಿಸಿ
5 ಕಂಪನಿಗಳು ವಿವಿಧ ಹುದ್ದೆಗಳಿಗೆ ಹಲವಾರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು.

Leave a Reply

Your email address will not be published. Required fields are marked *

error: Content is protected !!