ಮುಟ್ಟಳ್ಳಿಯಲ್ಲಿ ಬೃಹತ್ ಹಿಂದೂ ಸಮಾಜೋತ್ಸವ

Share

ಭಟ್ಕಳ: ಹಿಂದು ಸಮ್ಮೇಳನ ಸಮಿತಿ ಮುಟ್ಟಳ್ಳಿ ಮಂಡಲ ವತಿಯಿಂದ ಭಾನುವಾರದಂದು ಇಲ್ಲಿನ ಮೂಡಭಟ್ಕಳ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಹಿಂದು ಸಮ್ಮೇಳನವು ಅದ್ದೂರಿಯಾಗಿ ಜರುಗಿತು.

ಸಮ್ಮೇಳನವನ್ನು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಸಮ್ಮೇಳನದ ಮುಖ್ಯ ವಕ್ತಾರ ಹಿಂದು ಜಾಗರಣಾ ವೇದಿಕೆ ಶಿವಾನಂದ ಬಡಿಗೇರ ಮಾತನಾಡಿ ‘ಧರ್ಮವನ್ನು ಪಂಚ ಪರಿವರ್ತನೆ ಉದ್ದೇಶ ಇಟ್ಟುಕೊಂಡು ಕಾರ್ಯಕ್ರಮ ಆಯೋಜನೆ ಆಗಿದೆ. ಕುಟುಂಬ ಒಡೆಯುತ್ತಿರುವ ಸಂಧರ್ಭದಲ್ಲಿ ಇದರಲ್ಲಿ ಕುಟುಂಬ ಪ್ರಭೋದನೆ, ಸ್ವದೇಶಿ ಜೀವನ ಶೈಲಿಯನ್ನು ಅನುಸರಿಸಬೇಕು. ನಮ್ಮ ಭಾರತದಲ್ಲಿನ ವಸ್ತುಗಳ ಬಳಕೆ ಹೆಚ್ಚಾಗಬೇಕು.
ಈ ಕಾರ್ಯಕ್ರಮ ಸಂಘ -ಸಂಸ್ಥೆಗಳು, ಜಾತಿ ಮತಗಳ ವಿರುದ್ದವಲ್ಲ. ಇದು ನಮ್ಮ ಹಿಂದು ಧರ್ಮದ ಒಗ್ಗಟ್ಟು ಮೂಡುವ ಕಾರ್ಯಕ್ರಮ ಇದಾಗಿದೆ.


ಪ್ರಕ್ರತಿಯ ಹುಟ್ಟಿನಿಂದ ಹಿಂದು ಧರ್ಮ ಸ್ರಷ್ಟಿಯಾಗಿದೆ. 50 ಸಾವಿರ ವರ್ಷದ ಹಿಂದೆ ಇದೆಯೇ ಧರ್ಮ ಆರಂಭವಾಗಿದೆ. ಇಂತಹ ಸಂಧರ್ಬದಲ್ಲಿ ನಮ್ಮ ಧರ್ಮವನ್ನು ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ.
ನಮ್ಮಲ್ಲಿ ಧರ್ಮವು ಸ್ವಾಭಿಮಾನಿ ಹಿಂದು, ತಾನು ಬಹಿರಂಗ ಹಿಂದು ಆಗಲ್ಲ. ನಾವು ಹಿಂದು ಆದರೆ ಸುಮ್ಮನೆ ಇರಲಿದ್ದೇನೆ, ಹಿಂದು ಎನ್ನುವುದನ್ನು ಮರೆತಿರುವ ಹಿಂದುಗಳಾಗಿ ಸದ್ಯ ನಮ್ಮ ಸಮಾಜದಲ್ಲಿವೆ. ನಮ್ಮ ಮುತ್ಯ ಮತ್ತು ಮುತ್ತಾತ ತಪ್ಪು ಮಾಡದಿದ್ದರೆ ಬೇರೆ ಧರ್ಮವೇ ಹುಟ್ಟುತ್ತಿರಲ್ಲಿಲ್ಲ. ಗಡಿಬಿಡಿ ಸಂತತಿಗಳಿಂದ ನಮ್ಮ ಧರ್ಮವನ್ನು ಏನು ಮಾಡಲು ಸಾಧ್ಯವಿಲ್ಲ.


ಬ್ರಿಟಿಷರು ನೈಜ ಇತಿಹಾಸವನ್ನು ಮರೆಮಾಚಿ ನಮ್ಮನ್ನು ದಾರಿ ತಪ್ಪಿಸಿದ್ದಾರೆ. ನಮ್ಮ ಮಕ್ಕಳಿಗೆ ಶಿವಾಜಿ ಮಹಾರಾಜರ ಕಥೆಗಳನ್ನು ಹೇಳದೇ ಇರುವುದು ತಪ್ಪು. ನಮ್ಮ ಧರ್ಮದ ಹೆಣ್ಣು ಮಕ್ಕಳು ಇತ್ತೀಚಿನ ದಿನದಲ್ಲಿ ಲವ್ ಜಿಹಾದ್  ಬಲೆಗೆ ಬೀಳುತ್ತಿದ್ದಾರೆ. ನಮ್ಮ ಮಕ್ಕಳ ಮೇಲೆ ನಮಗೆ ಕಾಳಜಿ ಜಾಗ್ರತೆ ಇರಬೇಕು. ಪ್ರೇಂಡ್ ಶೀಪ್ ಡೇ, ವ್ಯಾಲೈಂಟೈನ್ ಡೇ ಇವೆಲ್ಲದರ ಮಧ್ಯೆ ನಮ್ಮ ಧರ್ಮ ಹಾದಿ ತಪ್ಪುತ್ತಿದೆ.
ನಮ್ಮಲ್ಲಿ ಶತಾಬ್ದಿ ಕಾರ್ಯಕ್ರಮ ದೇಶದ ಸಂಪ್ರದಾಯವಾಗಿದೆ. 3 ರಿಂದ 3.5 ಲಕ್ಷ ಯುವತಿಯರು ಲವ್ ಜಿಹಾದ್ ನಲ್ಲಿ ಬಿದ್ದಿದ್ದಾರೆ.
ಬಾಲಿವುಡ್ ನ ಕೆಲ ಬೇರೆ ಧರ್ಮದ ನಟರು, ಕ್ರಿಕೆಟಗರು ಹಿಂದು ಯುವತಿಯನ್ನು ಮದುವೆ ಆಗಿದ್ದಾರೆ. ಅವರೆಲ್ಲರು ನಮಗೆ ಹೀರೋ ಆಗಿದ್ದಾರೆ ಇದು ಬದಲಾಗಬೇಕು. ಸದ್ಯ ಜಾಹೀರಾತು ಮಾಡಿ ಬೇರೆ ಧರ್ಮದ ನಟರು ಬದುಕುತ್ತಿದ್ದಾರೆ. ಕಾರಣ ಹಿಂದು ಸಮಾಜ ಸರಿಯಾದ ಮಾರ್ಗದಲ್ಲಿ ಜಾಗ್ರತೆ ಆಗುತ್ತಿದೆ. ಇನ್ನು ಜಾಗ್ರತ ಆಗಬೇಕು.

ದೇಶದಲ್ಲಿ ನಮ್ಮ ಧರ್ಮದ ಜೊತೆಗೆ ಉಳಿದ ಧರ್ಮದವರು ಹಾಲಿನೊಂದಿಗೆ ಸಕ್ಕರೆ ನೀರಿನಂತೆ ಬೆರೆಯಬೇಕು. ಈಗ ಭಾರತ ಮಾತಾಕಿ ಜೈ ಎನ್ನುವ ಮಟ್ಟಿಗೆ ದೇಶದ ಬೇರೆ ಧರ್ಮದ ಜನರು ಬಂದು ನಿಂತಿದ್ದಾರೆ.
ಎಲ್ಲ ಒಳ್ಳೆಯತನವನ್ನು ಅನುಸರಿಸುವವರು ನಮ್ಮ ಹಿಂದು ಧರ್ಮವಾಗಿದೆ. ಚೀನಾದ ಸಾಂಸ್ಕೃತಿಕ ರಾಯಭಾರಿ ನಮ್ಮ ಭಾರತ ಆಗಿದೆ. ಇಂಡೋನೇಷ್ಯಾದಲ್ಲಿನ ಮಕ್ಕಳಿಗೆ ರಾಮಾಯಣ ಮಹಾಭಾರತ ಓದಿಸುತ್ತಿದ್ದಾರೆ.
ಆರ್.ಎಸ್.ಎಸ್. ಈ ದೇಶಕ್ಕೆ ಏನು ಮಾಡಿಲ್ಲ ಎನ್ನುವ ಧೈರ್ಯ ಈ ದೇಶದಲ್ಲಿ ಯಾರಿಗಿದೆ. ಹಿಂದು ಹುಟ್ಟಿದ್ದು ಭಗವಂತನಿಂದ. 800 ಜಿಲ್ಲೆಯಲ್ಲಿ 200 ಜಿಲ್ಲೆಯಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದೇವೆ.
ಈ ರಾಜಕಾರಣಿಗಳು ಅಸಹಾಯಕರು ಹಾಗಾಗಿ ಪೋಲಿಸರು ತಮ್ಮ ಕೆಲಸ ಮಾಡಲು ಆಗುತ್ತಿಲ್ಲ ಎಂದರು.


ಹಿಂದು ಸಮ್ಮೇಳನ ಸಮಿತಿ ಅಧ್ಯಕ್ಷ ವೆಂಕಟೇಶ ನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು‌.
ಒಂದು ವಾರದ ಹಿಂದೆ ಈ ಕಾರ್ಯಕ್ರಮ ತಯಾರಿ ಶ್ರಮ ಇದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ. ರೈತಾಪಿ ಸಹಿತ ಚಿಕ್ಕ ಪುಟ್ಟ ಕೆಲಸ ಮಾಡಿಕೊಂಡಿರುವ ಉತ್ತಮ ಗ್ರಾಮ ನಮ್ಮ ಮುಟ್ಟಳ್ಳಿ ಆಗಿದೆ. ಅಂದಿನ ಶಾಸಕರಾದ ಡಾ.ಚಿತ್ತರಂಜನ್ ಅವರು ಭಟ್ಕಳಕ್ಕೆ ಬಂದಾಗ ಮುಟ್ಟಳ್ಳಿಯನ್ನು ಆಯ್ಕೆ ಮಾಡಿಕೊಂಡಿದ್ದರು.
1970ರಲ್ಲಿ ಇದೇ ಜಾಗದಲ್ಲಿ ಶಾಖೆಯನ್ನು ಮಾಡಬೇಕೆಂದು ಆಯ್ಕೆ ಮಾಡಿದರು. ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿಯನ್ನು ವಹಿಸಿದ್ದರು. ಅಲ್ಲಿಂದ ಸಂಘದ ಪ್ರತಿಯೊಂದು ಕಾರ್ಯಕ್ರಮ ಆರಂಭವಾಯಿತು. ಈ ನರಸಿಂಹ ದೇವಸ್ಥಾನದಿಂದ ಆರಂಭಗೊಂಡ ಧರ್ಮದ ಕಾರ್ಯಕ್ರಮ ಇಂದು ಸಹ ಮುಂದುವರೆದಿದೆ ಎಂದರು.
ಹಿಂದು ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಕ್ರಷ್ಣ ನಾಯ್ಕ, 5 ಗ್ರಾಮ ಒಟ್ಟು 13 ವಿವಿಧ ಸಮಾಜದ ಪ್ರಮುಖರ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಇದಕ್ಕು ಪೂರ್ವದಲ್ಲಿ ಭಟ್ಕಳ ರೈಲ್ವೆ ನಿಲ್ದಾಣದ ಸಮೀಪದಲ್ಲಿನ ಶ್ರೀ ನಾಗಮಾಸ್ತಿ ದೇವಸ್ಥಾನದಿಂದ ಭವ್ಯ ಶೋಭಾಯಾತ್ರೆಯು ಮುಟ್ಟಳ್ಳಿ ಗ್ರಾಮ ಪಂಚಾಯತ್ ಮಾರ್ಗವಾಗಿ ಮೂಡಭಟ್ಕಳ ಬೈಪಾಸ್ ತನಕ ತೆರಳಿ ಅಲ್ಲಿಂದ ಸಭಾ ಕಾರ್ಯಕ್ರಮ ನಡೆಯುವ ಲಕ್ಷ್ಮೀ ನರಸಿಂಹ ದೇವಸ್ಥಾನದ ತನಕ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮಹಿಳೆಯರು, ಪುರುಷರು, ಮಕ್ಕಳು ಮೆರವಣಿಗೆಯಲ್ಲಿ ಸಾಗಿ ಬಂದರು.
ಕಾರ್ಯಕ್ರಮದಲ್ಲಿ ಪ್ರಾರ್ಥನೆ ಗೀತೆಯನ್ನು ಪೂರ್ವಿ ಹಾಗೂ ಸಂಗಡಿಗರು ಹಾಡಿದರು. ಸಮಿತಿಯ ಕ್ರಷ್ಣ ನಾಯ್ಕ ಸ್ವಾಗತಿಸಿದರೆ, ಪತ್ರಕರ್ತ ಈಶ್ವರ ನಾಯ್ಕ ನಿರೂಪಿಸಿದರು. ವಿನೋದ ಶೆಟ್ಟಿ ವಂದಿಸಿದರು.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.

Leave a Reply

Your email address will not be published. Required fields are marked *

error: Content is protected !!