“ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ ಪಡೆದ ವಿದ್ಯಾಂಜಲಿ ಶಾಲೆಯವಿದ್ಯಾರ್ಥಿ”.

Share

ಭಟ್ಕಳ: ಇಲ್ಲಿನ ಐಸಿಎಸ್‌ಸಿ ಪಠ್ಯಕ್ರಮದ ವಿದ್ಯಾಂಜಲಿ ಪಬ್ಲಿಕ್ ಶಾಲೆಯ 5ನೇ ತರಗತಿ ವಿದ್ಯಾರ್ಥಿಯಾದ ತೇಜ್ವಲಪ್ರಭ ಎನ್ ಡಿ ಇವನು ಲೀಡ್. ಸಂಸ್ಥೆಯು ನಡೆಸಿದ ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮೊದಲ ಸ್ಥಾನ ಗಳಿಸುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ. ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಈ ವಿದ್ಯಾರ್ಥಿಯು ಆಧುನಿಕ ತಂತ್ರಜ್ಞಾನ ಆಧಾರಿತ ಮನೆಯ ವಿನ್ಯಾಸವನ್ನು ಪ್ರದರ್ಶಿಸಿ ಜನ ಮೆಚ್ಚುಗೆ ಗಳಿಸಿದನು. ಇದೇ ಕಾರ್ಯಕ್ರಮದಲ್ಲಿ ಕೋಡಿಂಗ್
ವಿಭಾಗದಲ್ಲಿ ಮತ್ತು ಇಂಗ್ಲಿಷ್ ಕ್ವಿಜ್ ವಿಭಾಗದಲ್ಲಿ ಇನ್ನೋರ್ವ ವಿದ್ಯಾರ್ಥಿನಿ ಮಾನ್ಯ ಲಕ್ಷ್ಮೀಶ ನಾಯ್ಕ ಭಾಗವಹಿಸಿ ಉತ್ತಮ ಪ್ರದರ್ಶನವನ್ನು ನೀಡಿದ್ದು ಶಾಲೆಯ ಗುಣಮಟ್ಟದ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಭಟ್ಕಳ್ ಎಜ್ಯುಕೇಶನ್ ಟ್ರಸ್ಟ್. ಚೇರ್ ಮನ್ ಡಾಕ್ಟರ್ ಸುರೇಶ್ ನಾಯಕ್ ವಿಶೇಷವಾಗಿ ಅಭಿನಂದಿಸಿದ್ದಾರೆ. ಟ್ರಸ್ಟಿನ ಸದಸ್ಯರು, ಶಾಲೆಯ ಪ್ರಾಂಶುಪಾಲರು, ಶಿಕ್ಷಕರು,
ಪಾಲಕರು ವಿದ್ಯಾರ್ಥಿಯ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!