
ಶಿರಸಿ : ಶಿರಸಿ ಪಿ ಡಬ್ಲ್ಯೂ ಡಿ ಉಪ ವಿಭಾಗದಲ್ಲಿ ಕಾಮಗಾರಿ ಇಲ್ಲಿ ನೆಪ ಮಾತ್ರ, ಕಾಮಗಾರಿ ಹೆಸರಲ್ಲಿ ಇಲಾಖೆಯ ಅನುದಾನವೆಂಬ ನಿಧಿಯನ್ನು ಹೆಗ್ಗಣಗಳು ವ್ಯಾಪಕವಾಗಿ ಅಗೆದು ನುಂಗಿದೆ.

ಶಿರಸಿಯಲ್ಲಿ ಎರಡು ಪ್ರವಾಸಿ ಮಂದಿರಗಳಿವೆ ಒಂದು ಹೊಸದು ಇನ್ನೊಂದು ಹಳೆಯದು. ಈಗ ಈ ಎರಡು ಪ್ರವಾಸಿ ಮಂದಿರಗಳಿಗೆ ಹೊಸ ಪೀಠೋಪಕರಣ ಹೆಸರಿನಲ್ಲಿ 25 ಲಕ್ಷ 78 ಸಾವಿರ 437ರೂ ಖರ್ಚು ತೋರಿಸಲಾಗಿದೆ. ಹಳೆಯ ಪ್ರವಾಸಿ ಮಂದಿರದ ಕಟ್ಟಡ ನಿರ್ವಹಣೆಗೆ 1 ಲಕ್ಷ 99 ಸಾವಿರ 636 ರೂ ಗಳ ಖರ್ಚು ಮಾಡಲಾಗಿದೆ ಎನ್ನುವ ಮಾಹಿತಿಯ ದಾಖಲೆಗಳು ಲಭ್ಯವಾಗಿದೆ.

ವಾಸ್ತವವಾಗಿ ಹಳೆಯ ಪ್ರವಾಸಿ ಮಂದಿರ ಸ್ಥಿತಿಯು ಕರುಣಾಜನಕವಾಗಿದೆ. ಇಲ್ಲಿ ಹೆಗ್ಗಣಗಳೆ ಸಾಮ್ರಾಜ್ಯವನ್ನ ನಡೆಸುತ್ತಿರುವುದಂತೂ ಸತ್ಯ. ಮೇಲಾಧಿಕಾರಿಗಳ ದಿವ್ಯ ನಿರ್ಲಕ್ಷವು ಎದ್ದು ಕಾಣುತ್ತಿದೆ. ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳುವುದೇ ?
