ಶ್ರೀವಲಿ ಸಂಕ್ರಾಂತಿ ಸಂಭ್ರಮ

Share

ಶ್ರೀವಲಿ ಸಂಕ್ರಾಂತಿ ಸಂಭ್ರಮ

ಶ್ರೀ ಚಿತ್ರಾಪುರ ಮಠ ಶ್ರೀವಲಿ ಟ್ರಸ್ಟ್ ಇದರ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀವಲಿ ಪಿ.ಯು. ಕಾಲೇಜು ಚಿತ್ರಾಪುರ ವಿದ್ಯಾರ್ಥಿಗಳಿಂದ ಅದ್ದೂರಿಯಾಗಿ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಡಾ. ರವೀಂದ್ರ ಕಾಯ್ಕಿಣಿ ರವರ ಮಾರ್ಗದರ್ಶನದಂತೆ ಕಾಲೇಜಿನ ಆವರಣದಲ್ಲಿ ಸಂಕ್ರಾಂತಿ ಸಂಭ್ರಮವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.


ಹಿಂದೂ ಧರ್ಮದ ಸಂಕೇತವಾದ ಈ ಹಬ್ಬದ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಮಮತಾ ಭಟ್ಕಳ ರವರು ಮಾತನಾಡಿ ಹಬ್ಬದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ವಿದ್ಯಾರ್ಥಿಗಳು ಹಾಗೂ ಶ್ರೀವಲಿ ಪ್ರೌಢಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.
ವರದಿ: ಉಲ್ಲಾಸ ಶಾನಭಾಗ್ ಶಿರಾಲಿ

Leave a Reply

Your email address will not be published. Required fields are marked *

error: Content is protected !!