
ಭಟ್ಕಳ: ಭಟ್ಕಳ ಶಹರ ಪೊಲೀಸ್ ಠಾಣಾ ಗುನ್ನಾ ನಂ:74/1996 ಕಲಂ:- 3 & 25(1)( A) Arms act ಅಡಿಯಲ್ಲಿ ಆರೋಪಿತನಾದ ಮಹಮ್ಮದ್ ಜಾವೇದ್ ಹಮೀದ್ ಖಾಜಿಯಾ ವಯಸ್ಸು 55 ಸುಲ್ತಾನ್ ಸ್ಟ್ರೀಟ್ ಭಟ್ಕಳ ಹಾಲಿ ಗ್ಯಾಲಕ್ಸಿ ಅಪಾರ್ಟ್ಮೆಂಟ್ , ಕನಗೋ ಎಸ್ಟೇಟ್ ಗೀತಾ ನಗರ ಥಾಣೆ ಮಹಾರಾಷ್ಟ್ರ ನಿವಾಸಿ ಈತನು ಪ್ರಕರಣ ದಾಖಲಾದ ನಂತರದಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದನು.

ಸದರಿ ವಾರಂಟ್ ಆರೋಪಿತನಾದ ಮಹಮ್ಮದ್ ಜಾವಿದ್ ಅಬ್ದುಲ್ ಹಮೀದ್ ಖಾಜಿಯಾ ಈತನ ಪತ್ತೆಯ ಕುರಿತು ಒಂದು ನುರಿತ ವಿಶೇಷ ತಂಡವನ್ನ ಮಾಡಿ ಖಚಿತ ಮತ್ತು ತಾಂತ್ರಿಕ ಮಾಹಿತಿ ಮೇಲೆ ಆರೋಪಿತನನ್ನು ಮುಂಬೈಯಲ್ಲಿ ದಿನಾಂಕ 7 /01/2026 ರಂದು ವಶಕ್ಕೆ ಪಡೆದು08/01/2026ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಈ ಕಾರ್ಯಾಚರಣೆಯನ್ನು ಶ್ರೀ ದೀಪನ್ ಎಂ ಎನ್, ಪೋಲಿಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ, ಶ್ರೀ ಎಂ ಕೃಷ್ಣಮೂರ್ತಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ ಕಾರವಾರ, ಶ್ರೀ ಜಗದೀಶ ಎಂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶ್ರೀ ಮಹೇಶ್ ಎಂ ಪೊಲೀಸ್ ಉಪಾದೀಕ್ಷಕರು ಭಟ್ಕಳ್ ಉಪ ವಿಭಾಗ ಇವರ ಮಾರ್ಗದರ್ಶನದಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ದಿವಾಕರ ಪಿಎಂ, ಪಿಎಸ್ಐ ನವೀನ್ ಎಸ್ ನಾಯ್ಕ ಇವರ ನೇತೃತ್ವದಲ್ಲಿ ಭಟ್ಕಳ ಶಹರ ಪೋಲಿಸ್ ಠಾಣೆಯ ಸಿಬ್ಬಂದಿಯವರಾದ ಎ ಎಸ್ ಐ ಅಂತೋನ್ ಫರ್ನಾಂಡಿಸ್, ಗಿರೀಶ್ ಅಂಕೋಲೆಕರ್, ದೀಪಕ್ ಎಸ್ ನಾಯ್ಕ್, ಮಹಾಂತೇಶ್ ಹಿರೇಮಠ್ ಇವರುಗಳು ಆರೋಪಿಯನ್ನ ಬಂಧನ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿರುತ್ತಾರೆ. ವಾರೆಂಟ್ ಆರೋಪಿತನನ್ನ ಪತ್ತೆ ಮಾಡುವಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಭಟ್ಕಳ ಶಹರ ಪೊಲೀಸ್ ಠಾಣೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರನ್ನ ಪೊಲೀಸ್ ಹಿರಿಯ ಅಧಿಕಾರಿಗಳು ಅಭಿನಂದಿಸಿರುತ್ತಾರೆ.
