ಭಟ್ಕಳ:ತಾಲೂಕಿನಲ್ಲಿನ ಪಡಿತರ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಸಾಗಿಸುತ್ತಿದ್ದ ಏಳು ಮಂದಿಯನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಹಾಗೂ ಆಹಾರ ಇಲಾಖೆಯ ನಿರೀಕ್ಷಕ ಉದಯ ತಳವಾರ ಅವರ ಸಹಕಾರದಲ್ಲಿ ನಡೆದ ದಾಳಿಯ ವೇಳೆ, 228 ಚೀಲಗಳಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 11,400 ಕ್ವಿಂಟಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ ರೂ. 3.87 ಲಕ್ಷವಾಗಿದ್ದು, ಅಕ್ರಮ ಸಾಗಾಟಕ್ಕೆ ಬಳಸಲಾಗುತ್ತಿದ್ದ ಅಶೋಕ ಲೈಲೆಂಡ್ ಲಾರಿ, ಮಾರುತಿ ಓಮ್ಮಿ ಹಾಗೂ ಅಶೋಕ ಲೈಲೆಂಡ್ ದೋಸ್ತ್ ವಾಹನಗಳನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಸಮೀರ ಮುಗಳಿಹೊಂಡ ಮತ್ತು ಸಬೂಲ್ ಮುಗಳಿಹೊಂಡ (ಗಣೇಶನಗರ), ಮಲ್ಲಿಕಾರ್ಜುನ ಆರ್. (ಮಾಗಡಿ, ರಾಮನಗರ), ನಿತೀನ ಹೆಚ್.ಎನ್. (ಹೊಂಬೆಗೌಡನಹಳ್ಳಿ) ಸೇರಿದಂತೆ ವಾಹನಗಳ ಮಾಲಕರು ಹಾಗೂ ಚಾಲಕರು ಎಂದು ಗುರುತಿಸಲಾಗಿದೆ.
ಈ ಕುರಿತು ಆಹಾರ ನಿರೀಕ್ಷಕ ಉದಯ ತಳವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ: ಉಲ್ಲಾಸ್ ಶಾನಭಾಗ ಶಿರಾಲಿ.
