ಭಟ್ಕಳ: ಕಳೆದ ಜನವರಿ ಮೂವತ್ತರಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ಪಿಡಿಒ ಗ್ರಾಮದ ತೆಂಗಿನ ಗುಂಡಿಯಲ್ಲಿ ಸಾವರ್ಕರ್ ಬೋರ್ಡ್ ಸಮೇತ ಭಗವದ್ವಜ ಕಟ್ಟೆಯನ್ನು ತೆರವು ಮಾಡಿದ್ದರು.
ಬಿಜೆಪಿಯ ಮತ್ತು ಹಿಂದೂ ಕಾರ್ಯಕರ್ತರೊಂದಿಗೆ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಅದೇ ಸ್ಥಳದಲ್ಲಿ ಹನುಮ ಧ್ವಜವನ್ನು ಹಾರಿಸಿದ್ದಾರೆ. ಇಂದು ಅವರು ಕಾರ್ಯಕರ್ತರ ಸಭೆಗೆಂದು ತೆಂಗನಗುಂಡಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹನುಮಧ್ವಜವನ್ನು ಹಾರಿಸಿದ್ದಾರೆ ಮತ್ತು ವೀರ ಸಾವರ್ಕರ್ ಬೋರ್ಡನ್ನು ಹಾಕಿದ್ದಾರೆ. ಈ ಮೂಲಕ ಸಂಸದ ಸಂಸದ ಅನಂತ್ ಕುಮಾರ್ ಹೆಗಡೆಯವರು ಮತ್ತೆ ಹನುಮಧ್ವಜ ದಂಗಲ್ ಕಿಡಿ ಹೊತ್ತಿಸಿದ್ದಾರೆ. ದೇಶ ಮತ್ತು ಧರ್ಮದ ವಿಚಾರ ಬಂದಾಗ ನನ್ನನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಎಂದು ಮತ್ತೊಮ್ಮೆ ತೋರಿಸಿದ್ದಾರೆ.