ಪ್ರತಿಷ್ಠಿತ ಲಯನ್ಸ್ ಕ್ಲಬ್ ಮುರುಡೇಶ್ವರ ಇದರ ನೂತನ ಅಧ್ಯಕ್ಷರಾಗಿ ಸಾಯಿದತ್ತ ಗಾಂಜೆಕರ್
ಕಾರ್ಯದರ್ಶಿಯಾಗಿ ಎಂ.ವಿ. ಹೆಗಡೆ ಹಾಗೂ ಖಜಾಂಚಿಯಾಗಿ ರವೀಂದ್ರ ಶೆಟ್ಟಿ ವಿದ್ಯುಕ್ತವಾಗಿ ಅಧಿಕಾರ
ಸ್ವೀಕರಿಸಿದರು.

ಭಟ್ಕಳದ ಶಿರಾಲಿಯ ಶ್ರೀದೇವಿ ಹೆರಿಟೇಜ್ ಹಾಲ್‌ನಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ
ಹೊನ್ನಾವರದ ಲಯನ್ಸ್ ಕ್ಲಬ್‌ನ ಫಾಸ್ಟ್ ಕ್ಯಾಬಿನೆಟ್ ಸೆಕ್ರೆಟರಿ ಎಂ.ಜೆ .ಎಫ್ .ಲಯನ್ ಎಸ್. ಜೆ.
ಖೈರನ್ ರವರು ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿದರು. ನೂತನ ಅಧ್ಯಕ್ಷ ಸಾಯಿದತ್ತ
ಗಾಂಜೆಕರ್ ಮಾತನಾಡಿದರು.

ವೇದಿಕೆಯಲ್ಲಿ ರೀಜನಲ್ ಚೇರ್ ಪರ್ಸನ್ ಸುಬ್ರಾಯ ನಾಯ್ಕ್, ಲಯನ್ಸ್ ಕ್ಲಬ್ ನೂತನ ಸೆಕ್ರೆಟರಿ
ಎಂ.ವಿ ಹೆಗಡೆ, ನೂತನ ಖಚಾಂಚಿ ರವೀಂದ್ರ ಶೆಟ್ಟಿ, ನಿಕಟ ಪೂರ್ವ ಕಾರ್ಯದರ್ಶಿ ನಾಗೇಶ್ ಮಡಿವಾಳ,
ನಿಕಟ ಪೂರ್ವ ಅಧ್ಯಕ್ಷ ಕಿರಣ್ ಕಾಯ್ಕಿಣಿ ಹಾಗೂ ಮುಖ್ಯ ಅತಿಥಿಯಾಗಿ ಶ್ರೀ ಶಿವಾನಂದ ನಾಯ್ಕ
ಉಪಸ್ಥಿತರಿದ್ದರು.

ನಿಕಟ ಪೂರ್ವ ಅಧ್ಯಕ್ಷ ಕಿರಣ್ ಕಾಯ್ಕಿಣಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಕಟ
ಪೂರ್ವ ಕಾರ್ಯದರ್ಶಿ ನಾಗೇಶ್ ಮಡಿವಾಳ ವರದಿ ವಾಚಿಸಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ
ಸಾಧನೆ ತೋರಿದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ
ಗೌರವಿಸಲಾಯಿತು. ಡಾ. ಸುನಿಲ್ ಜತನ್ ಪರಿಚಯಿಸಿದರು. .ಲಯನ್ಸ್ ಪದಾಧಿಕಾರಿಗಳಾದ ಬಾಬು
ಮೊಗೇರ, ನಾಗರಾಜ್ ಭಟ್, ಗೌರೀಶ್ ಆರ್ ನಾಯ್ಕ್, ಜಗದೀಶ್ ಜೈನ್, ಗಜಾನನ ಭಟ್, ಡಾ.
ವಾದಿರಾಜ ಭಟ್, ಡಾ. ಹರಿಪ್ರಸಾದ್ ಕಿಣಿ, ಡಾ.ಮನೋಜ್ ಆಚಾರ್ಯ, ಮಂಜುನಾಥ್ ನಾಯ್ಕ,
ವಿಶ್ವನಾಥ್ ಮಡಿವಾಳ, ವಿಶ್ವನಾಥ್ ಕಾಮತ್, ರಾಮದಾಸ್ ಶೇಟ್, ಪ್ರಸನ್ನ ಡಿಕೊಸ್ಟ, ಶಿವಕುಮಾರ್
ಹಿಚ್ಕಡ, ಕಿರಣ್ ಮಾನಕಾಮೆ, ದ್ಯಾನೇಶ್ ಮಾನಕಾಮೆ, ಗೌರೀಶ ನಾಯ್ಕ ಸೇರಿದಂತೆ ಹಲವರು
ಸಹಕರಿಸಿದರು. ರವಿಕಲಾ ಎಸ್.ಕಾಯ್ಕಿಣಿ ಪ್ರಾರ್ಥಿಸಿದರು. ಕೃಷ್ಣ ಬಿ. ಹೆಗಡೆ ಕಾರ್ಯಕ್ರಮ
ನಿರೂಪಿಸಿದರು.
