ಶಸ್ತ್ರವಿಲ್ಲದ ಯುದ್ಧ ನೀತಿ “ಗಾಂಧಿವಾದ ” ಅಮರವಾಗಿರಲಿ -ಶಾಸಕ ಡಾ॥ ಎನ್ ಟಿ ಶ್ರೀನಿವಾಸ್

Share

ವಿಜಯನಗರ ಜಿಲ್ಲೆ ಕೂಡ್ಲಿಗಿ : ಶಸ್ತ್ರವಿಲ್ಲದ ಯುದ್ಧ ನೀತಿಯನ್ನು ಪ್ರಪಂಚಕ್ಕೆ ತೋರಿಸಿದ ಮಹಾತ್ಮರವರ ಗಾಂಧೀವಾದ ಪ್ರಪಂಚಕ್ಕೆ ಮಾದರಿಯಾಗಿದ್ದು. ಅದು ಸರ್ವರಿಗೂ ಸರ್ವಕಾಲಕ್ಕೂ , ಅಮರವಾಗಿರಬೇಕೆಂದು ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ನುಡಿದರು. ಅವರು ಅಕ್ಟೋಬರ್ 2 ರಂದು , ಪಟ್ಟಣದ ಗಾಂಧೀಜಿ ಚಿತಾಭಸ್ಮ ಸ್ಮಾರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿ ಮಾತನಾಡಿದರು. ಜಗದ ಕಷ್ಟಗಳಿಗೆ ಮರುಗುತ್ತಿದ್ದ ಬಾಪುವಿನ , ಹೃದಯದೊಳಗೆ ಅದೆಷ್ಟೋ ಕರುಣೆ ಪ್ರೀತಿ ತುಂಬಿತ್ತೆಂದು ಊಹಿಸುವುದು ಅಸಾಧ್ಯ.
ಶಸ್ತ್ರವಿಲ್ಲದೆ ಯುದ್ಧ ಗೆಲ್ಲಲು ಸಾಧ್ಯವಿದೆ ಎಂಬುದನ್ನು ಸಾಧಿಸಿ ತೋರಿಸಿದ , ಮಹಾತ್ಮ ಗಾಂಧೀಜಿಯವರು ತನ್ನ ವೈರಿಗಳಿಗೂ ಮಾನವೀಯತೆ ಮೂಲಕ ಕಣ್ಣು ತೆರೆಸಿದ ಮಹಾನ್ ಸಂತರಾಗಿದ್ದಾರೆ ಎಂದರು. ಧರ್ಮದ ಹಾದಿಯಲ್ಲಿ ನಡೆಸಿದ ದಾರ್ಶನಿಕರಾಗಿದ್ದು , ಸತ್ಯ, ಶಾಂತಿ, ಸಹನೆ , ಸರ್ವಧರ್ಮ , ಸಮಭಾವ ಗಾಂಧೀಜಿಯವರ ಜೀವನ ಮಾರ್ಗವಾಗಿದ್ದವು. ಗಾಂಧೀಜಿಯವರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ , ನಾವು ಗಾಂಧಿಯವರಂತೆ ಆಗಲು ಸಾಧ್ಯ ಎಂದರು. ಕೂಡ್ಲಿಗಿ ತಹಶೀಲ್ದಾರರಾದ ಕುಮಾರಿ ವಿ.ಕೆ ನೇತ್ರಾವತಿ ಸೇರಿದಂತೆ , ವಿವಿದ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು. ✍ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *

error: Content is protected !!