ಕೂಡ್ಲಿಗಿ:ಜೀತ ಪದ್ದತಿ ರದ್ದತಿ ದಿನಾಚರಣೆ-ಜಾಗ್ರತೆ ಜಾಥಾ- ಫೆ9_ ವಿಜಯನಗರ ಜಿಲ್ಲೆ ಕೂಡ್ಲಿಗಿ: ನ್ಯಾಯಾಂಗ ಇಲಾಖೆ, ಕಾನೂನು ಸೆೇವಾ ಸಮಿತಿ, ಕಾರ್ಮಿಕ ಇಲಾಖೆ, ತಾಲೂಕು ಆಡಳಿತ ಹಾಗೂ ವಿವಿದ ಇಲಾಖೆಗಳ ಸಹಯೋಗದೊಂದಿಗೆ. ಜೀತ ಪದ್ಧತಿ ರದ್ದತಿ ದಿನಾಚರಣೆ ಆಚರಿಸಲಾಯಿತು, ಪ್ರಯುಕ್ತ ಜಾಗ್ರತಿ ಜಾಥವನ್ನು ಹಮ್ಮಿಕೊಳ್ಳಲಾಯಿತು. ನ್ಯಾಯಾಲಯದ ಆವರಣದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಮಹಾಲಕ್ಷ್ಮಿ ರವರು, ಹಸಿರು ನಿಶಾನೆ ತೋರಿ ಜಾಗ್ರತಿ ಜಾಥಾಕ್ಕೆ ಚಾಲನೆ ನೀಡಿದರು. ನ್ಯಾಯಾಲಯ ಇಲಾಖೆಯ ಶಿರಸ್ಥೇದಾರರಾದ, ನಾಗರಾಜರವರು ಜೀತ ಪದ್ಧತಿ ರದ್ದತಿ ಕುರಿತು ಸಂಕಲ್ಪತೊಡುವ ಪ್ರಮಾಣ ವಚನವನ್ನು ಭೋದಿಸಿದರು. ನಂತರ ಜಾಥಾವು ಪಟ್ಟಣದ ಮದಕರಿ ವೃತ್ತ ತಲುಪಿತು, ಸಾರ್ವಜನಿಕರನ್ನುದ್ದೇಶಿಸಿ ಹೋರಾಟಗಾರರು ಹಾಗೂ ಪ್ಯಾನಲ್ ವಕೀಲರಾದ ಸಿ ವಿರುಪಾಕ್ಷಪ್ಪ ಮಾತನಾಡಿದರು. ಜೀತಪದ್ಧತಿ ವಿರುದ್ಧ ಜಾರಿಯಲ್ಲಿರುವ ಕಾನೂನು ತಿಳುವಳಿಕೆಯನ್ನ ನೀಡಿದರು, ಮತ್ತು ಸಮಾಜಕ್ಕೆ ಅನಿಷ್ಠವಾದ ಜೀತ ಪದ್ಧತಿಯನ್ನು ನಿರ್ಮೂಲನೆಗೆ ಎಲ್ಲರೂ ಬದ್ಧರಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತರು, ಸಂಬಂಧಿಸಿದ ಇಲಾಖೆಗಳ ನೆರವು ಪಡೆಯಬೇಕೆಂದು ಕರೆ ನೀಡಿದರು. ತಾಲೂಕು ಪಂಚಾಯ್ತಿ ಇ ಓ ವೈ.ರವಿಕುಮಾರ, ಕಾರ್ಮಿಕ ಅಧಿಕಾರಿ ಮಂಜುಳಾ, ಶಿಕ್ಷಣ ಇಲಾಖೆಯ ಜಗಧೀಶ , ವಕೀಲರ ಸಂಘದ ಅಧ್ಯಕ್ಷ ಜಿ.ಎಂ.ಮಲ್ಲಿಕಾರ್ಜುನಯ್ಯ ಸೇರಿದಂತೆ ಇತರರು ಮಾತನಾಡಿ ಸಾರ್ವಜನಿಕರಲ್ಲಿ ಜಾಗ್ರತಿ ಮೂಡಿಸಿದರು. ಪಿಎಸ್ಐ ಧನುಂಜಯ ಕುಮಾರ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಫಿರೋಜ್ ಖಾನ್ ಸೇರಿದಂತೆ ವಿವಿದ ಇಲಾಖೆಗಳ ಅಧಿಕಾರಿಗಳು. ವಿವಿದ ಇಲಾಖೆಗಳ ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಕಾನೂನು ಸೇವಾ ಸಮಿತಿ ಸಿಬ್ಬಂದಿ. ನ್ಯಾಯಾಂಗ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು. ಆಶಾ ಕಾರ್ಯಕರ್ತೆಯರು ಜಾಥಾದಲ್ಲಿ ಹಾಜರಿದ್ದರು. ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು. ಹಿರಿಯ ವಕೀಲರು. ನೂರಾರು ಸಾರ್ವಜನಿಕರು ಹಾಗೂ ನಾಗರೀಕರು ಉಪಸ್ಥಿತರಿದ್ದರು.✍
ಕೂಡ್ಲಿಗಿ:ಜೀತ ಪದ್ದತಿ ರದ್ದತಿ ದಿನಾಚರಣೆ-ಜಾಗ್ರತೆ ಜಾಥಾ
