ವಿಶ್ವ ಕ್ಯಾನ್ಸರ್ ದಿನಾಚರಣೆ – 2024 – ವಿದ್ಯಾರ್ಥಿಗಳಿಂದ ಉದ್ಘಾಟನೆ ಮಾಡುವುದರ ಮೂಲಕ ವಿದ್ಯಾರ್ಥಿಗಳಿಂದ ಅರಿವು.
ಕ್ಯಾನ್ಸರ್ ಖಾಯಿಲೆ ಶೇಕಡಾ25 ರಷ್ಟು ನಮಗೆ ಗೊತ್ತಿಲ್ಲದೆ ಬರುತ್ತದೆ. ಶೇಕಡಾ75 ರಷ್ಟು ನಮಗೆ ತಿಳಿದು ಬರುತ್ತದೆ. ತಂಬಾಕು ಸೇವನೆ ಯಿಂದ, ತಂಪು ಪಾನೀಯ ದಿಂದಾಗಿ, ಕೆಲವು ವಸ್ತುಗಳನ್ನು ಸೇವನೆ ಯಿಂದ ಮತ್ತು ಬಳಸುವದರಿಂದ ಕ್ಯಾನ್ಸರ್ ಬರುತ್ತದೆ ಎಂದು ತಿಳಿದರೂ ಅಂತಹ ವಸ್ತುಗಳನ್ನು ತಿನ್ನುತ್ತೆವೆ ಮತ್ತು ಬಳಕೆ ಮಾಡುತ್ತೆವೆ ಎಂದರು. ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಂದ ಉದ್ಘಾಟಿಸಲು ಕಾರಣ ಮಕ್ಕಳಿಂದಲೇ ಅರಿವು ಮೂಡಿಸುವ ಉದ್ದೇಶ ಎಂದು ಹೇಳಿದರು.
ನನ್ನ ಮಾಹಿತಿಯ ಪ್ರಕಾರ ಭಟ್ಕಳ ತಾಲೂಕಿನಲ್ಲಿ ಶೇಕಡ ಮೂರಕ್ಕಿಂತ ಹೆಚ್ಚು ಜನರು ಕ್ಯಾನ್ಸರ್ ಪೀಡಿತರಾಗಿದ್ದು, ಹೆಚ್ಚಿನವರಿಗೆ ಕ್ಯಾನ್ಸರ್ ಇದೆ ಎಂಬುದೇ ಗೊತ್ತಿಲ್ಲ, ಇದರಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂದರು. ನಿಮಗೆ ಕ್ಯಾನ್ಸರ್ ಇರುವುದು ಗೊತ್ತಾದರೆ ವಾಸಿಯಾಗದ ಕಾಯಿಲೆ ಎಂದು ಭಯಪಡುವ ಅಗತ್ಯವಿಲ್ಲ, ಕ್ಯಾನ್ಸರ್ ಚಿಕಿತ್ಸೆ ಈಗ ಸಾಧ್ಯ, ಅದನ್ನು ನಿರ್ಲಕ್ಷಿಸದೆ ಸಕಾಲಿಕ ಚಿಕಿತ್ಸೆಗೆ ಗಮನ ಕೊಡಿ ಎಂದು ಸಾರ್ವಜನಿಕರಲ್ಲಿ ವಿನಂತಿಸಿಕೊಂಡರು.
ಸಾರ್ವಜನಿಕರಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಸರ್ಕಾರಿ ಆಸ್ಪತ್ರೆಯಿಂದ ಸಂತೆ ಮಾರ್ಕೆಟ್ ರಸ್ತೆ ಮಾರ್ಗವಾಗಿ ಶಂಶುದ್ದೀನ್ ವೃತ್ತದ ವರೆಗೆ ಜಾಥಾ ನಡೆಸಲಾಯಿತು.