ರಾಜ್ಯ ಮೀನುಗಾರಿಕಾ ಮತ್ತು ಬಂದರು ಒಳನಾಡು ಜಲಸಾರಿಗೆ , ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಮಂಕಾಳ್ ವೈದ್ಯರವರು, ಶನಿವಾರ ದಿನಾಂಕ 3.02.2024 ಸಾಯಂಕಾಲ 4.00 ಗಂಟೆಗೆ ಭಟ್ಕಳದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನೂತನ ಪಲ್ಲಕ್ಕಿ ಬಸ್ ಸೇವೆಗೆ ಚಾಲನೆ ನೀಡಿದರು .
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಇದ್ದ ಬಸ್ಸುಗಳನ್ನು ಮಾರಿಕೊಂಡು ತಿಂದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಬಸ್ಸು ಭಟ್ಕಳಕ್ಕೆ ಬರಲಿಲ್ಲ. ಇದ್ದ ಎಲ್ಲಾ ಬಸ್ಸು ಗಳನ್ನು ಮಾರಾಟ ಮಾಡಿದರು. ಹೀಗಾಗಿ ಜನರಿಗೆ ಓಡಾಡಲು ಬಸ್ಸುಗಳಿಗೆ ಇಲ್ಲದ ಹಾಗೆ ಮಾಡಿದರು. ಹಳ್ಳಿಗಳಲ್ಲಿ ಬಸ್ಸ ಇಲ್ಲದ ಕಾರಣ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಬಿಜೆಪಿಯವರು ಮೂಲೆಗೆ ಹಾಕಿದ ಹಳೆಯ ಬಸ್ಸುಗಳನ್ನು ದುರಸ್ತಿಗೊಳಿಸುತ್ತಿದ್ದೇವೆ. ಅದರ ಜೊತೆಗೆ ಹೊಸ ಬಸ್ಸುಗಳೂ ಕೂಡ ತರಿಸುತ್ತಿದ್ದೇವೆ. ಭಟ್ಕಳದಲ್ಲಿ ಹಳ್ಳಿ ಭಾಗಕ್ಕೆ ಪ್ರತಿ ಐದು ನಿಮಿಷಕ್ಕೆ ೨೦ ಬಸ್ಸುಗಳು ಪರಿಸರ ಸ್ನೇಹಿ ಬಸ್ಸುಗಳನ್ನು ಕೊಟ್ಟಿದ್ದೇ. ಆದರೆ ಈಗ ಅವು ಎಲ್ಲಿ ಹೋಗಿದ್ದೇವೆ ಎನ್ನುವುದು ಗೊತ್ತಿಲ್ಲ ಎಂದು ಸಚಿವರು ಹೇಳಿದರು. ಉತ್ತರ ಕನ್ನಡ ಜಿಲ್ಲೆಗೆ ಇನ್ನೂ 50 ಬಸ್ಸು ಬರಲಿದೆ. ರಾಜ್ಯದಲ್ಲಿ ಮಹಿಳೆಯರಿಗಾಗಿ ಉಚಿತ ಬಸ್ಸ್ ಪ್ರಯಾಣ ಯೋಜನೆ ಮಹಿಳೆಯರ ಜೊತೆಗೆ ಕೆ.ಎಸ್. ಆರ್. ಟಿ. ಸಿ. ಸಂಸ್ಥೆಗೂ ಶಕ್ತಿಯನ್ನು ತಂಬೂವುದರ ಜೊತೆಗೆ ಪ್ರತಿದಿನ 35ಲಕ್ಷ ಆದಾಯ ಬರುತ್ತಿದೆ ಎಂದು ಸಚಿವರು ಹೇಳಿದರು.
ಮುರುಡೇಶ್ವರದಿಂದ ಬೆಂಗಳೂರು, ಬೆಂಗಳೂರುನಿಂದ ಮುರುಡೇಶ್ವರಕ್ಕೆ ಪ್ರತಿ ದಿನ ನಾನ್ ಎಸಿ ಸ್ಲಿಪರ್ ಪಲ್ಲಕ್ಕಿ ಬಸ್ ಸಂಚಾರ ಪ್ರಾರಂಭ ಮಾಡಲಿದೆ.
