
ಸ್ಪರ್ಧೆಯನ್ನು ಸವಲಾಗಿ ಸ್ವೀಕರಿಸಿ, ಸೋಲು ಗೆಲುವಿನ ಸೋಪಾನ, ಗೆಲುವಾದಾಗ ಸಂತೋಷವನ್ನು ಪಡಿ, ಸೋತಾಗ ಕುಗ್ಗಬೇಡಿ, ಪ್ರತಿಭೆ ಎಲ್ಲರಲ್ಲೂ ಇರುತ್ತದೆ, ಪ್ರದರ್ಶಿಸುವ ವಿಧಾನ ಮಾತ್ರ ಬೇರೆ ಬೇರೆಯಾಗಿರುತ್ತದೆ ಎಂದು ಶ್ರೀ ಉಮೇಶ ಹೆಗಡೆಯವರು ನುಡಿದರು. ಅವರು ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ “ಪ್ರತಿಭಾ ಪುರಸ್ಕಾರ” ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಡಳಿತಾಧಿಕಾರಿ ಎಂ ಎಸ್ ಹೆಗಡೆ ಗುಣವಂತೆಯವರು ಮಾತನಾಡಿ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯನ್ನು,ಕಲಿಸಿದ ಗುರು ಹಿರಿಯರನ್ನು ಎಂದು ಮರೆಯಬಾರದು, ತಂದೆ ತಾಯಿಯನ್ನು ಗೌರವಿಸಬೇಕು, ಸಂಸ್ಕಾರವಂತರಾಗಬೇಕು ಎಂದು ಕರೆ ನೀಡಿದರು. ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಿಕ್ಷಕಿ ಅನಿತಾ ನಾಯ್ಕ ಸ್ವಾಗತಿಸಿದರು, ಅಂಜನ ಶೆಟ್ಟಿ ವಂದಿಸಿದರು, ಅಶ್ವಿನಿ ಮೆಸ್ತ ನಿರೂಪಿಸಿದರು. ಆದರ್ಶ ವಿದ್ಯಾರ್ಥಿನಿ ದೀಕ್ಷಾ ಶಿವರಾಮ ಹೆಗಡೆ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಪುರಸ್ಕರಿಸಲಾಯಿತು. ಶಾಲಾ ಸಿಬ್ಬಂದಿ ವರ್ಗದವರು ಹಾಗೂ ಪಾಲಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು