ಭಟ್ಕಳ ತಾಲೂಕಿನ ಹೆಬಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಂಗನಗುAಡಿಯಲ್ಲಿ ವೀರ ಸಾವರ್ಕರ ದ್ವಜಕಟ್ಟೆ ತೆರವು ಕುರಿತು ಉಂಟಾದ ಗೊಂದಲಕ್ಕೆ ಕಾಂಗ್ರೆಸ್ ಪಕ್ಷವಾಗಲಿ ಅಥವಾ ಸಚಿವರಾಗಲಿ ಕಾರಣವಲ್ಲ. ಇದು ಭಟ್ಕಳದಲ್ಲಿ ಅಸ್ಥಿತ್ವ ಕಳೆದುಕೊಳ್ಳುವ ಭೀತಿಯಲ್ಲಿರುವ ಬಿ.ಜೆ.ಪಿ ಹುಟ್ಟಹಾಕಿರುವ ಸಮ್ಯಸೆ. ಕಳೆದ ವರ್ಷ ರಾಜದಲ್ಲಿ ಮತ್ತು ಹೆಬಳೆ ಗ್ರಾಮ ಪಂಚಾಯತಿಯಲ್ಲಿ ನೀವೆ ಆಡಳಿತ ನಡೆಸುತ್ತಿರುವಾಗ ವೀರ ಸಾವರ್ಕರ ಹೆಸರಿನ ದ್ವಜಕಟ್ಟೆ ಕಟ್ಟಲು ಅನುಮತಿ ನೀಡದೆ ಮಸಿದಿಗೆ ಹಸಿರು ಬೋರ್ಡ ಹಾಕಲು ಅನುಮತಿ ನೀಡಿದ್ದಿರಿ ಆಗ ಇಲ್ಲದ ಪ್ರೀತಿ ಈಗ ಬಿ.ಜೆ.ಪಿ ಯವರಿಗೆ ಸಾವರ್ಕರ ಮೇಲೆ ಪ್ರೀತಿ ಹೇಗೆ ಬಂತು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಪ್ರಶ್ನೆ ಮಾಡಿದ್ದಾರೆ.
ಅವರು ಕಾಂಗ್ರೆಸ್ ಕಛೇರಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ೨೦೨೨ ರಲ್ಲಿ ಬಿ.ಜೆ.ಪಿಯ ಯುವಕರು ತೆಂಗಿನಗುಡಿಯಲ್ಲಿ ಸಾವರ್ಕರ ಹೆಸರಿನಲ್ಲಿ ಕಟ್ಟೆ ಕಟ್ಟಲು ಪಂಚಾಯತಿಗೆ ಮನವಿ ಸಲ್ಲಿಸಿದ್ದರು. ಅಂದು ನೀವೇ ಅಧಿಕಾರದಲ್ಲಿ ಇದ್ದರು ಕೂಡ ಕಟ್ಟೆಗೆ ಅನುಮತಿ ನೀಡಲಿಲ್ಲ. ನಮ್ಮ ಬಳಿ ಪಂಚಾಯತಿ ನೀಡಿದ ಆದೇಶದ ಪ್ರತಿ ಇದೆ ಎಂದು ಹೇಳಿದರು.
ಬಿ.ಜೆ.ಪಿ ಪಕ್ಷದವರು ಚುನಾವಣೆ ಸಂದರ್ಭದಲ್ಲಿ ಜನರ ಮದ್ಯೆ ದ್ವೇಷ ಹುಟ್ಟಿಸಲು ವೀರ ಸಾವರ್ಕರ ಹೆಸರಿನಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದರು.
ಬಿಜೆಪಿ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಪತ್ರಿಕಾಗೋಷ್ಠಿಯಲ್ಲಿ ನಮ್ಮ ಸಚಿವರ ಒತ್ತಡವಿದೆ ಎಂದು ಆರೋಪ ಮಾಡಿದ್ದಾರೆ. ಅವರು ಕಾನೂನಿನ ಅರಿವಿಲ್ಲದೇ ಏನೇನೋ ಮಾತನಾಡುತ್ತಿದ್ದಾರೆ. ಅಧಿಕಾರವಿರುವಾಗಲೇ ಕಟ್ಟೆಯನ್ನ ಕಟ್ಟಲು ವಿರೋಧಿಸಿದವರು ನೀವು. ಈಗ ನಮ್ಮ ಸಚಿವರ ಮೇಲೆ ಗೂಬೆ ಕೂರಿಸಲು ಬಂದದ್ದಾರೆ ಎಂದು ಹೇಳದರು. ನಮಗೂ ಭಗವಾ ದ್ವಜ ಹಾಗು ಸಾವರ್ಕರ್ ಮೇಲೆ ಗೌರವವಿದೆ. ನಿಮಗೆ ಸಾವರ್ಕರ್ ಮೇಲೆ ಸ್ವಲ್ಪವು ಗೌರವವಿದ್ದರೆ ಅಭಿವೃದ್ಧಿ ಮಾಡಿತೋರಿಸಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನ ಮುಖಂಡರಾದ ರಾಮ ಮೊಗೇರ, ಜಯಶ್ರೀ ಮೊಗೇರ, ನಾರಾಯಣ ನಾಯ್ಕ ಈಶ್ವರ್ ನಾಯ್ಕ, ಗೋಪಾಲ ನಾಯ್ಕ, ವಿಷ್ಣು ದೇವಾಡಿಗ, ನಯನ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ನಿಮ್ಮ ಪಕ್ಷ ಆಡಳಿತವಿದ್ದಾಗ ಅನುಮತಿ ನೀಡದೆ ಈಗ ನಮ್ಮ ಮೇಲೆ ಗೂಬೆ ಕೂರಿಸಲು ಬಂದಿದ್ದಾರೆ : ವೆಂಕಟೇಶ ನಾಯ್ಕ
